Latest Post

“ಪಾರ್ಲೆ-ಜಿ ಬಿಸ್ಕತ್ತು ಪ್ಯಾಕೆಟ್‌ನಲ್ಲಿರುವ ಹುಡುಗಿ ಯಾರು? ಐಕಾನಿಕ್ ಪಾರ್ಲೆ-ಜಿ ಮಗುವಿನ ಹಿಂದಿನ ನೈಜ ಕಥೆ”

ಭಾರತದಲ್ಲಿ ಹೆಚ್ಚು ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಬಿಸ್ಕತ್ತು ಎಂದರೆ ಅದು ಪಾರ್ಲೆ-ಜಿ. ಸಣ್ಣ ಹಳದಿ ಮತ್ತು ಬಿಳಿ ಪ್ಯಾಕೆಟ್, ಅದರಲ್ಲಿ ಮುದ್ದಾದ ಹುಡುಗಿ – ಈ ದೃಶ್ಯ ಯಾರಿಗೆ ಪರಿಚಯವಿಲ್ಲ? ಪಾರ್ಲೆ-ಜಿ ಬಿಸ್ಕತ್ತು ಎಲ್ಲೆಯೂ ಲಭ್ಯವಿರುವ, ಕಡಿಮೆ ಬೆಲೆಯ,…

ಮಹಾಭಾರತದ ಯುದ್ದದಲ್ಲಿ ಶನಿಪರಮಾತ್ಮನ ಪಾತ್ರವೇನು ಗೊತ್ತಾ..?

ಪ್ರತಿಯೊಬ್ಬರಿಗೂ ತಿಳಿದಿರುವಂತೆ ದ್ವಾಪರಯುಗದಲ್ಲಿ ನಡೆದ ಕೌರವ ಪಾಂಡವರ ನಡುವಿನ ಕುರು ಸಂಗ್ರಾಮ ಧರ್ಮ ಅಧರ್ಮದ ಯುದ್ಧವೆಂದೆ ಗಣನೀಯವಾಗಿತ್ತು. ಜಗತ್ತಿಗೆ ಮಾರಕವಾಗಿ ಪರಿಣಮಿಸಿದ್ದ. ಅಧರ್ಮಿಗಳಾದ ಕೌರವ ಸೇನೆಯನ್ನು ಮಣ್ಣಿಸಲು ಪಾಂಡವರ ಸಾಹಸ ಧೈರ್ಯಗಳು ಅಪರಿಮಿತವಾದದ್ದು. ಆದರೆ ಅಧರ್ಮಿಗಳಾದ ಕೌರವರನ್ನು ಸಂಪೂರ್ಣವಾಗಿ ನಾಶಪಡಿಸಲು ಪಾಂಡವರ…

ದೇವಸ್ಥಾನದಲ್ಲಿ ತೆಂಗಿನಕಾಯಿ ಒಡೆಯುವುದರ ಹಿಂದಿರುವ ನಿಜವಾದ ಕಾರಣವೇನು?

ತೆಂಗಿನಕಾಯಿ ಅಥವಾ ಗಿನಕಾಯಿ ಭಾರತೀಯ ಸಂಸ್ಕೃತಿಯ ಅತ್ಯಂತ ಪವಿತ್ರವಾದದ್ದು . ಆರೋಗ್ಯ ದೃಷ್ಟಿಯಿಂದ ತೆಂಗಿನ ನೀರು ಬಹುಪಯೋಗಿ. ಆದರೆ ಧಾರ್ಮಿಕ ನಂಬಿಕೆಗಳಿಂದಾಗಿ, ಇದು ಪೂಜಾ ಕ್ರಮದಲ್ಲಿ ಬಹುಮುಖ್ಯವಾದದ್ದು. ಹಿಂದೂ ಧರ್ಮದಲ್ಲಿ, ವಿಶೇಷವಾಗಿ ದೇವಸ್ಥಾನದ ಆವರಣದಲ್ಲಿ ಪೂಜಾ ವಿಧಾನದ ಭಾಗವಾಗಿ ತೆಂಗಿನಕಾಯಿ ಒಡೆಯುವ…

ಆಕಾಶದಲ್ಲಿ ಸಂಗ್ರಹವಾಗುವ ತ್ಯಾಜ್ಯ: ವಿಮಾನ ಶೌಚಾಲಯದ ರಹಸ್ಯ..!!

ಮೋಡಗಳ ನಡುವೆ ಸಾವಿರಾರು ಮೀಟರ್ ಎತ್ತರದಲ್ಲಿ ಹಾರಾಟ ನಡೆಸುವ ವಿಮಾನ ಪ್ರಯಾಣವು ವಿಶಿಷ್ಟ ಅನುಭವ ನೀಡುತ್ತದೆ. ಕೆಲವೇ ಗಂಟೆಗಳಲ್ಲಿ ನೂರಾರು ಕಿಲೋಮೀಟರ್ ದೂರವನ್ನು ಕವರಿಸುವ ಸಾಮರ್ಥ್ಯದಿಂದ, ವಿಮಾನಯಾನ ಅನೇಕರ ಕನಸಾಗಿದೆ. ವಿಮಾನವು ಎತ್ತರಕ್ಕೆ ಹೋದಂತೆ ವಾತಾವರಣದಲ್ಲಿ ಮಹತ್ವದ ಬದಲಾವಣೆಗಳು ಆಗುತ್ತವೆ. ಒಳಗೆ…

ಒಂದು ಭೂತದ ಕಥೆ..!!

ಮೌನದ ಶಕ್ತಿ ಎನ್ನುವುದು ಜೀವನದಲ್ಲಿ ಅಪಾರ ಮಹತ್ವ ಹೊಂದಿದೆ. ವನವಾಸದ ಸಮಯದಲ್ಲಿ ಪಾಂಡವರು ದಟ್ಟವಾದ ಕಾಡಿನಲ್ಲಿ ಎಲೆಗಳ ಸರಳ ಗುಡಿಸಲನ್ನು ನಿರ್ಮಿಸುತ್ತಿದ್ದರು. ಒಂದು ಸಂಜೆ, ಒಂದು ಸಣ್ಣ, ಕಪ್ಪು ನೆರಳಿನ ಆಕೃತಿ ಕಾಣಿಸಿಕೊಂಡಿತು ಮತ್ತು ಅವರ ಅಂಗಳದಲ್ಲಿ ಕುಳಿತುಕೊಂಡಿತು. ಅದನ್ನು ನೋಡಿದ…

ಊಟ ಮಾಡುವ ಮುನ್ನ ನಮಸ್ಕಾರ ಏಕೆ ಮಾಡಬೇಕು ಗೊತ್ತೇ..?

ಭಾರತೀಯ ಸಂಸ್ಕೃತಿಯಲ್ಲಿ ಆಹಾರವನ್ನು ಜೀವಪೋಷಕ, ದೇವರ ಕೃಪೆಯಂತೆ ಪರಿಗಣಿಸಲಾಗುತ್ತದೆ. ಇದರಿಂದಾಗಿ, ಊಟಕ್ಕೆ ಮುನ್ನ ನಮಸ್ಕಾರ ಮಾಡುವುದು ಕೇವಲ ಶಿಷ್ಟಾಚಾರವಲ್ಲ, ಅದು ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಆಧ್ಯಾತ್ಮಿಕ ಮಹತ್ವ: ಸೂರ್ಯಭಗವಾನನು ಉತ್ತರ ದಿಶೆಯಲ್ಲಿ ಪಯಣಿಸಿ ಭೂಮಿಯಲ್ಲಿರುವ ಸಾರವನ್ನು ಹೀರಿಕೊಳ್ಳುತ್ತಾನೆ ನಂತರ…

“ನೂರೆಂಟು ಸಲ ಸ್ನಾನದ ಕಥೆ”

ನೂರೆಂಟು ಸಲ ಸ್ನಾನ ಎಂಬ ಈ ವಾಕ್ಯವು ನಮ್ಮ ಜೀವನದಲ್ಲಿ ಶಾಂತಿ ಮತ್ತು ತಾಳ್ಮೆಯ ಸಂಕೇತವಾಗಿದೆ.ಅದು ಹೇಗೆ ಎನ್ನುವ ಪ್ರಶ್ನೆ ನಿಮಗೆ ಕಾಡುತ್ತಿರುತ್ತದೆ,ನಿಮ್ಮ ಈ ಪ್ರಶ್ನೆಗೆ ಒಂದು ಕಥೆಯ ಮುಖಂತರ ನಿಮಗೆ ತಿಳಿಸುತ್ತೇನೆ ಬನ್ನಿ. ಒಂದು ಪುಟ್ಟ ಹಳ್ಳಿಯಲ್ಲಿ ರಾಮನ ಪರಮ…

ಮಹಾ ಕುಂಭಮೇಳ ಹಾಗೂ ಅದರ ವಿಶೇಷತೆ..!!

ಪ್ರಪಂಚದಲ್ಲಿ ಅತ್ಯಂತ ವಿಜೃಂಭಣೆ ಮತ್ತು ಕೋಟ್ಯಾನುಕೋಟಿ ಭಕ್ತಾದಿಗಳು ಸೇರಿ ನಡೆಸುವ ಏಕೈಕ ಹಬ್ಬವೆಂದರೆ ಅದೇ ಭಾರತದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳ. ಕುಂಭಮೇಳದಲ್ಲಿ ಮೂರು ರೀತಿ ಕುಂಭಮೇಳವನ್ನ ಆಚರಿಸುತ್ತಾರೆ.ಅರ್ಧ ಕುಂಭಮೇಳ, ಪೂರ್ಣ ಕುಂಭಮೇಳ ಮತ್ತು ಮಹಾ ಕುಂಭಮೇಳ. ಅರ್ಧ…

ರಾಮಾಯಣದ ಕಥೆಗಳು ಮತ್ತು ಪಾಠಗಳು..!!

“ಅಧ್ಯಾತ್ಮಿಕ ಕಥೆಗಳು” ಶಿವ ಧನಸ್ಸು ಮತ್ತು ರಾಮನ ವಿವಾಹ: ಹೆಚ್ಚಾಗಿ ನಾವು ರಾಮನ ವಿವಾಹವನ್ನು ತಿಳಿಯುತ್ತೇವೆ, ಆದರೆ ಇದರಲ್ಲಿ ಬಳಸಿದ ಶಿವ ಧನಸ್ಸು ಮತ್ತು ಅದರ ಮಹತ್ವವನ್ನು ನಾವು ಹೆಚ್ಚು ಗಮನಿಸುತ್ತಿಲ್ಲ. ಶಿವ ಧನಸ್ಸು ಪರಮಶಿವನಿಂದ ಬರುವ ಶಕ್ತಿಯುತ ಆಯುಧವಾಗಿದೆ. ಈ…

ಪ್ರೀತಿಯ ಅಣ್ಣ ತಮ್ಮಂದಿರ ಒಂದು ಬಾಂಧವ್ಯದ ಕಥೆ..!!

“ಸ್ಪೂರ್ತಿ ಕಥೆಗಳು” ಒಂದು ಊರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇದ್ದರು. ಅವರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ತಮ್ಮನಿಗೆ ಮಕ್ಕಳು ಹೆಚ್ಚು. ಅಣ್ಣನಿಗೆ ಮಕ್ಕಳು ಇರಲಿಲ್ಲ. ಆ ಅಣ್ಣ ತಮ್ಮಂದಿರು ಎಂದೂ ಜಗಳ ವಾಡುತ್ತಿರಲಿಲ್ಲ. ಆದರೆ ಮನೆಯಲ್ಲಿ ಮಡದಿಯರ ಕಾಟ, ಜಗಳ ಪ್ರಾರಂಭವಾಗಿ…

ಪ್ರಯತ್ನವಿಲ್ಲದೆ ಫಲವಿಲ್ಲ..!!

“ಸ್ಪೂರ್ತಿ ಕಥೆಗಳು” ಪ್ರಯತ್ನವಿಲ್ಲದೆ ಫಲವಿಲ್ಲ ಎಂಬ ಮಾತು ಸತ್ಯ ಏಕೆಂದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಾವು ಮಾಡುವ ಕೆಲಸದಲ್ಲಿ ಪ್ರಯತ್ನ ನಿರಂತರವಾಗಿರಬೇಕು ಅಂದಾಗ ಮಾತ್ರ ನಮಗೆ ಯಶಸ್ಸು ದೊರಕುತ್ತದೆ. ನಮ್ಮಿಂದ ಯಾವುದೇ ರೀತಿಯ ಪ್ರಯತ್ನವಿಲ್ಲದೆ ಹೋದರೆ ಯಾವುದೇ ರೀತಿಯ ಫಲ ನಮಗೆ…

ಕಾಲೇಜಿನಲ್ಲಿ ಮೊದಲ ಬಾರಿಗೆ ಅರಳಿದ ಪ್ರೀತಿ..!!

ಆಗ ತಾನೆ ಪಿಯು ವಿದ್ಯಾಭ್ಯಾಸವನ್ನು ಮುಗಿಸಿ ಡಿಗ್ರಿ ಗೆ ಕಾಲಿಟ್ಟಿರುವ ಸಮಯ, ಆ ಕ್ಷಣದಿಂದ ನಮ್ಮ ಮನಸ್ಸಿನಲ್ಲಿ ಹೊಸ ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿತ್ತು. ಮೊದಲನೆಯ ದಿನ ಕಾಲೇಜಿಗೆ ಹೋಗುವ ಸಂತೋಷ ಅದಕ್ಕಾಗಿ ಬೇಗನೆ ಎದ್ದು ದೈನಂದಿನದ ಕಾರ್ಯಕ್ರಮವನ್ನು ಮುಗಿಸಿಕೊಂಡು ಸ್ನಾನ…

ಪರುಶುರಾಮನ ಗರ್ವಭಂಗ ಕಥೆಯ ಭಾಗ 02..!!

“ಪರಶುರಾಮನ ಗರ್ವಭಂಗವಾದ ಕಥೆಯ ಭಾಗ ಮುಂದುವರೆಯುತ್ತದೆ” ಇಂತಹ ಉಗ್ರಕೋಪಿ ಪರಶುರಾಮನನ್ನು ಕಂಡು ದಶರಥನಿಗೆ ಹೆದರಿಕೆ ಯಾಯಿತು. ‘ಪರಶುರಾಮನಿಗೆ ಕ್ಷತ್ರಿಯರ ಮೇಲಿನ ಕೋಪ ಇನ್ನೂ ಇಳಿದಿಲ್ಲವೆ ?’ ಎಂದು ಆ ಕ್ಷತ್ರಿಯರಾಜ ಹೆದರಿಕೊಂಡ. ‘ನನ್ನ ಮಕ್ಕಳ ಗತಿಯೇನು?’ ಎಂದು ದುಗುಡಗೊಂಡ. ಆದರೂ ನಗುಮುಖದಿಂದ…

“ಪರುಶುರಾಮನ ಗರ್ವಭಂಗ” ಭಾಗ 01..!!

ದಶರಥ ಮಹಾರಾಜನು ತನ್ನ ಪ್ರಯಾಣವನ್ನು ಮುಂದುವರಿಸುತ್ತಿದ್ದಂತೆ ದಾರಿಯಲ್ಲಿ ಹಲವಾರು ಅಪಶಕುನಗಳೂ ಕಂಡವು. ಇದರಿಂದ ದಶರಥನಿಗೆ ಗಾಬರಿಯಾಯಿತು. ಯಾವ ವಿಪತ್ತುಕಾದಿದೆಯೋ ಎಂದು ಅವನು ಚಿಂತೆಗೊಳಗಾದ. ವಸಿಷ್ಠರನ್ನು ಕುರಿತು, “ಗುರುಗಳೇ! ಈ ಅಪಶಕುನಗಳಿಂದ ನನಗೆ ಭೀತಿಯಾಗುತ್ತಿದೆ” ಎಂದ. ವಸಿಷ್ಠರು “ಮಹಾರಾಜ ! ಹೆದರಬೇಡ. ನಮಗೆ…

ಪ್ರಪಂಚದಲ್ಲಿರುವ ಅತಿ ದೊಡ್ಡ ಕ್ರೂಸ್ ಹಡಗುಗಳು ಇವು..!!

“ಟಾಪ್ 10” ನೀವು ಈ ಜಗತ್ತಿನಲ್ಲಿ ಮೂರು ತರಹದ ಹಡಗುಗಳನ್ನ ನೋಡಿರುತ್ತೀರಾ ಅವುಗಳಲ್ಲಿ Crago ship,cruise ship, ಮತ್ತು warship ಈ ಮೂರು ಹಡುಗುಗಳಿಗೆ ಬೇರೆ ಬೇರೆ ರೀತಿಯ ವಿಶೇಷಗಳಿವೆ. Cargo ship ಈ ಹಡಗು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ…

ಕಾಯಕವೇ ಕೈಲಾಸ..!!

ಪರ್ವತಪುರ ಎಂಬ ರಾಜ್ಯದಲ್ಲಿ ಮಕುಜ ಎಂಬ ಕುದುರೆ ರಾಜನ ಬಳಿ ಕೆಲಸಕ್ಕೆ ಸೇರಿತ್ತು. ರಾಜ ಅರಮನೆಯಿಂದ ಹೊರಗೆ ಹೋಗುವಾಗ ಮಕುಜ ಕುದುರೆ ಏರಿ ಸಂಚರಿಸುತ್ತಿದ್ದ. ರಾಜನ ಕುದುರೆಯಾದ ಕಾರಣ ಮಕುಜನಿಗೆ ರಾಜವೈಭೋಗವೇ ದೊರೆಯುತ್ತಿತ್ತು. ಸಮಯಕ್ಕೆ ಸರಿಯಾಗಿ ಊಟ, ಸ್ನಾನ, ನಿದ್ದೆ ಮಾಡಿ…

ರಾತ್ರಿ ಇಲ್ಲದ ದೇಶಗಳು ಇವು…!!

“ಸಂಗತಿಗಳು” ಈ ಜಗತ್ತಿಗೆ ಬೆಳಕು ನೀಡುತ್ತಿರುವ ಸೂರ್ಯ ಚಂದ್ರರು ತಮ್ಮ ಸುಂದರವಾದ ಪ್ರತಿ ಬಿಂಬಗಳಿಂದ ದಿನನಿತ್ಯ ಅಚ್ಚರಿಗೊಳಿಸುತ್ತವೆ . ಅದೇ ರೀತಿ ಈ ಸೌರಮಂಡಳದಲ್ಲಿ ಭೂಮಿಯು ಕೂಡ ಒಂದು ಸುಂದರವಾದ ಗ್ರಹ. ನಮ್ಮ ಭೂಮಿಯ ಮೇಲೆ ಸರಿ ಸುಮಾರು 195 ದೇಶಗಳಿವೆ…

ನಮ್ಮ ಸೌರಮಂಡಲದಲ್ಲಿರುವ 5 ಗ್ರಹಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ..!!

“ಬ್ರಹ್ಮಾಂಡ” ನಮ್ಮ ಸೌರಮಂಡಲ ಎಷ್ಟೊಂದು ವಿಶಾಲವಾಗಿದೆಯೋ ಅಷ್ಟೇ ನಿಗೂಢವಾದ ವಿಷಯಗಳನ್ನು ಒಳಗೊಂಡಿವೆ. ನಮ್ಮ ಸೌರಮಂಡಲದಲ್ಲಿರುವಂತಹ ಒಂದೊಂದು ಗ್ರಹವು ಕೂಡ ಅದರದೇ ಆದ ವೈಶಿಷ್ಟಗಳು ಮತ್ತು ರಹಸ್ಯಮಯ ವಿಷಯಗಳನ್ನು ಒಳಗೊಂಡಿವೆ. ಇಂದು ನಾವು ಅಂತಹ ವೈಶಿಷ್ಟ್ಯ ಮತ್ತು ನಿಗೂಢತೆ ಹೊಂದಿರುವಂತಹ ಗ್ರಹಗಳ ಬಗ್ಗೆ…

ಫ್ರೆಂಡ್ ರಿಕ್ವೆಸ್ಟ್ ಸಿನಿಮಾ ಕನ್ನಡದಲ್ಲಿ ವಿವರಣೆ..!!

ಸಿನಿಮಾದ ನಟಿ ಲಾರಾ ತನ್ನ ಸಹಪಾಠಿ ಮರಿನಾ ಮಿಲ್ಸ್‌ನಿಂದ ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸುತ್ತಾಳೆ. ಅವಳಿಗೆ ಸ್ನೇಹಿತರಿಲ್ಲದಿರುವುದನ್ನು ಗಮನಿಸಿ, ಅವಳು ಫ್ರೆಂಡ್ ರಿಕ್ವೆಸ್ಟ್ ಅನ್ನು ಒಪ್ಪಿಕೊಳ್ಳುತ್ತಾಳೆ ಮತ್ತು ಇಬ್ಬರು ಸ್ನೇಹಿತರಂತೆ ಸಂಬಂಧವನ್ನು ಪ್ರಾರಂಭಿಸುತ್ತಾರೆ, ಆದರೆ ಮರೀನಾಳ ವಿಚಿತ್ರ ನಡವಳಿಕೆಯಿಂದ ಲಾರಾ  ಅವಳ…

“ಪ್ರಯತ್ನವಿಲ್ಲದೆ ಪಲವಿಲ್ಲ”

“ನೀತಿ ಕಥೆಗಳು” ವಿದ್ಯಾರಣ್ಯಪುರ ಎಂಬ ಊರಲ್ಲಿದ್ದ ಜಗದ್ಗುರುವೊಬ್ಬರು ಏನು ಹೇಳಿದರೂ ಅದು ನಿಜವಾಗುತ್ತದೆ ಎಂಬ ನಂಬಿಕೆ ಆ ಊರಿನ ಜನರಲ್ಲಿತ್ತು. ಹಾಗಾಗಿ ಆ ಊರು ಮಾತ್ರವಲ್ಲದೆ ಸುತ್ತಮುತ್ತಲಿನ ಹಾಗೂ ದೂರದ ಊರುಗಳಿಂದಲೂ ಜನರು ಅವರಲ್ಲಿಗೆ ಬಂದು ತಮ್ಮ ಭವಿಷ್ಯ ಕೇಳುತ್ತಿದ್ದರು. ಆ…

ಇಫ್ ಒನ್ಲಿ ಸಿನಿಮಾ ಕನ್ನಡದಲ್ಲಿ ವಿವರಣೆ..!!

2004 ರಲ್ಲಿ ಬಿಡುಗಡೆಯಾದ “If only” ಸಿನಿಮಾವು ಒಂದು ಅದ್ಬುತ Love story ಕಥೆಯನ್ನು ಹೊಂದಿದ್ದು ಪ್ರಪಂಚದಲ್ಲಿ ಇರುವ ಅದ್ಬುತ love story ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ. IMDB Ratings ನಲ್ಲಿ 7.2 ಪಡೆದುಕೊಂಡಿರುವ ಈ ಸಿನಿಮಾದಲ್ಲಿ Jeniffer lovehewit,…

ಗ್ರಾವಿಟಿ ಸಿನಿಮಾ ಕನ್ನಡದಲ್ಲಿ ವಿವರಣೆ..!!

2013ರ ಅಕ್ಟೋಬರ್ 11 ರಂದು ಬಿಡುಗಡೆಯಾದ “GRAVITY” ಸಿನಿಮಾವು ಪ್ರಪಂಚ ಕಂಡ ಅತ್ಯದ್ಬುತ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾವನ್ನು “AlfansoCuaron” ನಿರ್ದೇಶಿಸಿದ್ದು ಬರೋಬ್ಬರಿ 7 ಆಸ್ಕರ್ ಪ್ರಶಸ್ತಿಯನ್ನು ಇದು ಪಡೆದುಕೊಂಡಿದೆ. ಮುಂಬರುವ ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಎದುರಿಸಬಹುದಾದಂತಹ ತೊಂದರೆಯ ಕುರಿತು ತೆಗೆದಿರುವ…

ಟ್ರೈನ್ ಟು ಬೂಸಾನ್ ಸಿನಿಮಾ ಕನ್ನಡದಲ್ಲಿ ವಿವರಣೆ…!!

2016ರ ಮೇ 13 ರಂದು ಬಿಡುಗಡೆಯಾದ “Train to busan”ಸಿನಿಮಾವು ಒಂದು ಕೊರಿಯನ್ ಚಲನಚಿತ್ರವಾಗಿದೆ.118 ನಿಮಿಷಗಳ ಈ ಸಿನಿಮಾವು “ಜಾಂಬಿಗಳ” ಕುರಿತು ಇದೆ. 8.5 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ಪ್ರಪಂಚದೆಲ್ಲೆಡೆ ಬಿಡುಗಡೆಯಾಗಿಗಳಿಸಿದ್ದು ಬರೋಬ್ಬರಿ 98.4 ಮಿಲಿಯನ್…

ಪೊಸೆಶನ್ ಆಫ್ ಹನ್ನ ಗ್ರೇಸ್ ಸಿನಿಮಾ ಕನ್ನಡದಲ್ಲಿ ವಿವರಣೆ..!!

2018 ರ ನವೆಂಬರ್ 29 ರಂದು ಬಿಡುಗಡೆಯಾದ “Posession of Hannah grace” ಸಿನಿಮಾವು ಒಂದು ಅದ್ಬುತ ಹಾರರ್ ಸಿನಿಮ. “Diederik Van Rooijen” ನಿರ್ದೇಶನದ ಈ ಸಿನಿಮಾವು ಪ್ರಪಂಚದೆಲ್ಲೆಡೆ ಬಿಡುಗಡೆಯಾಗಿ ಗಳಿಸಿದ್ದು 4.3 ಕೋಟಿ ಅಮೆರಿಕನ್ ಡಾಲರ್. ಈ ಚಿತ್ರದ…

ಕ್ರಾಲ್ ಸಿನಿಮಾ ಕನ್ನಡದಲ್ಲಿ ವಿವರಣೆ..!!

2019 ರ ಜುಲೈ 12 ರಂದು ಬಿಡುಗಡೆಯಾದ “CRAWL” ಸಿನಿಮಾವು 13.5 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ನಿರ್ಮಾಣವಾದ ಭಯಾನಕ ಸಿನಿಮಾ. ಪ್ರಪಂಚದೆಲ್ಲೆಡೆ ಬಿಡುಗಡೆಯಾದ ಈ ಸಿನಿಮಾವು ಗಳಿಸಿದ್ದು ಬರೋಬ್ಬರಿ 90.5 ಮಿಲಿಯನ್ ಡಾಲರ್. “Michael ಮತ್ತು Shawn Rasmussen” ಬರೆದಿರುವ…

ಆಲ್ಫಾ ಸಿನಿಮಾ ಕನ್ನಡದಲ್ಲಿ ವಿವರಣೆ..!!

2018 ರ ಆಗಸ್ಟ್ 16 ರಂದು ಬಿಡುಗಡೆಯಾದ “Alpha” ಸಿನಿಮಾವು ನಿಮ್ಮನ್ನು 20 ಸಾವಿರ ವರ್ಷಗಳ ಹಿಂದೆ ಮನುಷ್ಯರು ವಾಸಿಸುತ್ತಿದ್ದ ರೀತಿಯನ್ನು ತೋರಿಸುವುದರ ಜೊತೆಗೆ ಮನುಷ್ಯ ಮತ್ತು ತೋಳದ ನಡುವೆ ಇರುವ ಸ್ನೇಹವನ್ನು ಬಿಂಬಿಸುವ ಕಥೆಯನ್ನು ಹೊಂದಿದೆ. “Albert Hughes” ನಿರ್ದೇಶನದ…

47 ಮೀಟರ್ಸ್ ಡೌನ್ ಸಿನಿಮಾ ಕನ್ನಡದಲ್ಲಿ ವಿವರಣೆ..!!

2019 ರ ಆಗಸ್ಟ್ 16 ರಂದು ಬಿಡುಗಡೆಯಾದ “47 Meters down uncaged” ಸಿನಿಮಾವು 86 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಒಂದು ಅದ್ಬುತ ಸಿನಿಮಾ. ಪ್ರಪಂಚದೆಲ್ಲೆಡೆ ಬಿಡುಗಡೆಯಾದ ಈ ಸಿನಿಮಾವು ಗಳಿಸಿದ್ದು ಬರೋಬ್ಬರಿ 720 ಕೋಟಿ. ಈ ಸಿನಿಮಾದ ಪ್ರಮುಖ…

ತಾಯಿಯ ಎದೆ ಹಾಲಿನ ಮಹತ್ವ ತಿಳಿದುಕೊಳ್ಳಲು ಇದನ್ನು ಓದಿ..!!

ತಾಯಿಯ ಎದೆ  ಹಾಲಿನ ಮಹತ್ವ ಎಂತಹದು ಎಂದರೆ ನಾವುಗಳು ನಮ್ಮ ದೇಹವು ಸದೃಡವಾಗಿ ಬೆಳೆಯಬೇಕೆಂದು ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತೇವೆ. ಇದಕ್ಕೆಂದು ಸಾಕಷ್ಟು ಹಣವನ್ನು ಕೂಡ ನಾವು ಖರ್ಚು ಮಾಡಲು ಸಿದ್ದವಿರುತ್ತೇವೆ. ಆದರೆ ಒಬ್ಬ ವ್ಯಕ್ತಿಯ ದೇಹಕ್ಕೆ ಬೇಕಾಗುವಂತಹ ಎಲ್ಲಾ…

ಭಗವದ್ಗೀತೆ ಮೊದಲ ಅಧ್ಯಾಯ – ಶ್ಲೋಕ 1

ಸಾಮಾನ್ಯವಾಗಿ ಭಗವದ್ಗೀತೆ ಓದಲು ಪ್ರಾರಂಭಿಸುವವರು ಮೊದಲ ಅಧ್ಯಾಯಕ್ಕೆ ಹೆಚ್ಚು ಒತ್ತು ಕೊಡದೆ, ನೇರವಾಗಿ ಎರಡನೆ ಅಧ್ಯಾಯದಲ್ಲಿ- ‘ಯುದ್ಧರಂಗದಲ್ಲಿ ಗೊಂದಲಕ್ಕೊಳಗಾದ ಅರ್ಜುನನಿಗೆ ಕೃಷ್ಣನ ಉಪದೇಶದಿಂದ’ ಪ್ರಾರಂಭಿಸುತ್ತಾರೆ. ಆದರೆ ಮೊದಲ ಅಧ್ಯಾಯದಲ್ಲಿ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳಿವೆ. ಆದ್ದರಿಂದಲೇ ಭಗವದ್ಗೀತೆಯ ಮೊದಲ ಅಧ್ಯಾಯವನ್ನು ‘ಅರ್ಜುನ…

ಭಗವದ್ಗೀತೆ ಮುನ್ನುಡಿ – Bhagavadgita Introduction

ಓಂ ನಮೋ ಭಗವತೇ ವಾಸುದೇವಾಯ.. ಎಲ್ಲರಿಗೂ ನಮಸ್ಕಾರ.. ಭಗವದ್ಗೀತೆ… ಇದು ಸಾಮಾನ್ಯವಾದ ಪುಸ್ತಕವಲ್ಲ. ಸನಾತನ ಧರ್ಮದ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ. ನಮ್ಮ ಪ್ರಾಚೀನರು ಭಗವದ್ಗೀತೆಗೆ ವೇದಗಳಿಗಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಎಲ್ಲಾ ಆಧ್ಯಾತ್ಮ ಸಾರವನ್ನು ಹೊತ್ತ…

ಈ ಐದು ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನವು ಬದಲಾಗುತ್ತೆ..!!

ಜೀವನವು ಅನೇಕ ಬದಲಾವಣೆಗಳನ್ನು ಅನುಭವಿಸುತ್ತದೆ. ಈ ಬದಲಾವಣೆಗಳು ನಮ್ಮ ಜೀವನದಲ್ಲಿ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತವೆ. ನಮ್ಮ ಜೀವನದ ಮಾರ್ಗವನ್ನು ಬದಲಾಯಿಸುವ ಘಟನೆಗಳು, ಅವು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ, ನಮ್ಮ ವ್ಯಕ್ತಿತ್ವವನ್ನು ಮತ್ತು ಭಾವನಾತ್ಮಕ ಸ್ಥಿತಿಯನ್ನು ಬದಲಾಯಿಸುತ್ತವೆ. ಬದಲಾವಣೆಗಳು ಸಹಜವಾಗಿಯೇ ಸಂಕಷ್ಟಗಳನ್ನು ತಂದರೂ,…

ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವ 6 ಸಮೃದ್ಧ ಹವ್ಯಾಸಗಳು..!!

ಹೊಸ ವರ್ಷವು ಆಗಮಿಸುತ್ತಿದ್ದಂತೆ, ಜನರು ತಮ್ಮ ಜೀವನವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಆದರೆ ಈ ಬದಲಾವಣೆಗಳು ಸಾಮಾನ್ಯವಾಗಿ ಬಹಳ ಕಾಲ ಮುಂದುವರಿಯುವುದಿಲ್ಲ. ಏಕೆಂದರೆ ಜನರು ಅವರ ಹಳೆಯ ಅಭ್ಯಾಸಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.  ನಾನು ನಿಮಗೆ ಜೀವನದ ದಿಕ್ಕನೆ ಬದಲಾಯಿಸುವ ಅಭ್ಯಾಸಗಳನ್ನು ಪರಿಚಯಿಸುತ್ತೇನೆ, ಇವು…

Refrigerator ಕಂಡುಹಿಡಿಯುವುದಕ್ಕಿಂತ ಮೊದಲು “ICE CUBES” ಗಳನ್ನು ಹೇಗೆ ತಯಾರಿಸುತ್ತಿದ್ದರು ಗೊತ್ತೆ?

ನಮಗೆಲ್ಲ ತಿಳಿದ ಹಾಗೆ cool drinks ಜೊತೆಗೆ ಹಾಗು ಮಧ್ಯಪಾನದ ಜೊತೆಗೆ ಅಥವ ice cream ಗಳನ್ನು ತಯಾರಿಸುವ ವೇಳೆ “ICE CUBES” ಗಳನ್ನು ಬಳಸುತ್ತೇವೆ. Refrigerator ಒಳಗೆ ನೀರನ್ನು ತುಂಬಿ ಕೆಲ ಸಮಯ ಇಟ್ಟರೆ ಸಾಕು ಈ ice cubes…

ಕೋಟಿ ಕೋಟಿ ಜೀವಗಳನ್ನು ಬಲಿ ತೆಗೆದುಕೊಂಡ ಸ್ಥಳವಿದು..!!

ಭೂಮಿಯ ಮೇಲೆ ಇನ್ನೂ ಕಣ್ಣಿಗೆ ಕಾಣದ ಹಾಗು ಅರ್ಥವಾಗದ ಎಷ್ಟೋ ವಿಸ್ಮಯಗಳಿವೆ. ಮನುಷ್ಯನು ಎಷ್ಟೇ ಬುದ್ದಿಶಾಲಿಯಾದರೂ ಕೆಲವೊಂದು ರಹಸ್ಯಗಳನ್ನು ಬೇದಿಸಲು ಅವನಿಂದ ಸಾಧ್ಯವಾಗುತ್ತಿಲ್ಲ. ಇಂತಹ ರಹಸ್ಯಗಳಲ್ಲಿ “ಬರ್ಮೋಡಾ ಟ್ರಯಾಂಗಲ್” ರಹಸ್ಯವು ಕೂಡ ಒಂದು. ಈ ಸ್ಥಳವು ಎಷ್ಟೋ ಪ್ರಾಣಗಳನ್ನು ತೆಗೆದುಕೊಂಡಿದೆ. ಎಷ್ಟೋ…

ಮನುಷ್ಯರಿಂದ ದೂರವಾಗಿದ್ದ ಇವರು ಪ್ರಾಣಿಗಳ ಕೈಯಲ್ಲಿ ಬೆಳೆದ ನಿಜವಾದ ಮೋಗ್ಲಿಗಳು..!

ನೀವೆಲ್ಲಾ ಪ್ರಸಿದ್ದ ಮೊಗ್ಲಿ, ಟಾರ್ಜನ್, ಕನ್ನಡದ ಕಾಡಿನ ರಾಜ ಸಿನಿಮಾ ನೋಡಿರುತ್ತೀರ. ಈ ಚಿತ್ರಗಳಲ್ಲಿ ತೋರಿಸಿರುವುದೇನೆಂದರೆ ಮನುಷ್ಯರಿಗಿಂತ ಪ್ರಾಣಿಗಳೇ ಉತ್ತಮ. ಪುಟ್ಟ ಕಂದಮ್ಮ ಕಾಡಿನ ಒಳಗಡೆ ಪ್ರಾಣಿಗಳ ಕೈಗೆ ಸಿಕ್ಕರೆ ಆ ಪ್ರಾಣಿಗಳು ಅದನ್ನು ತಿನ್ನದೆ ತಮ್ಮ ಮಗುವಿನ ತರಹ ನೋಡಿಕೊಂಡು…

ಮನುಷ್ಯನ ಪ್ರಾಣಕ್ಕೆ ಕುತ್ತು ತರುವ ಪ್ರಾಣಿಗಳನ್ನು ಸಾಕಿದ್ದಾರೆ ಇವರು..!!

ನಾಯಿ, ಬೆಕ್ಕುಗಳೆಂದರೆ ಮನುಷ್ಯರಿಗೆ ಅಚ್ಚು ಮೆಚ್ಚಿನ ಪ್ರಾಣಿಗಳೆಂದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವೆ.ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕುವ ಆಸೆ ಅದೆಷ್ಟೋ ಜನರಿಗೆ ಇರುತ್ತದೆ. ನಾವು ಹೇಳುವ ಹಾಗೆ ಮಾತು ಕೇಳುವ ಈ ಪ್ರಾಣಿಗಳ ಜೊತೆಗೆ ಆಟವಾಡುತ್ತ ಕಾಲ ಕಳೆಯುವ ಆ ಕ್ಷಣಗಳ ಆನಂದವೇ…

ಪ್ರಸಿದ್ದ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಪ್ರಕಾರ ನಮ್ಮ ಭೂಮಿ ಈ ರೀತಿ ಅಂತ್ಯವಾಗುತ್ತದೆಯಂತೆ..!

“ಸ್ಟೀಫನ್ ಹಾಕಿಂಗ್”, ಜಗತ್ತು ಕಂಡ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ತಮ್ಮ ಸಂಪೂರ್ಣ ಜೀವನವನ್ನು ವಿಜ್ಞಾನದ ಅನೇಕ ಸಂಶೋದನೆಗಳಿಗೆಂದೆ ಮೀಸಲಿಟ್ಟಿದ್ದ ಇವರು ಅನೇಕ ನಿಗೂಡ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಬಾಹ್ಯಾಕಾಶದಲ್ಲಿರುವ ಬ್ಲ್ಯಾಕ್ ಹೋಲ್ ಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ…

ಪ್ರಪಂಚದಲ್ಲಿರುವ 5 ಶಾಪಗ್ರಸ್ತ ಗೊಂಬೆಗಳಿವು..!

ಗೊಂಬೆಗಳೆಂದರೆ ಯಾರಿಗೆ ಇಷ್ಟವಿಲ್ಲ ನೀವೇ ಹೇಳಿ. ಅದರಲ್ಲೂ ಚಿಕ್ಕ ಮಕ್ಕಳಿಗಂತು ಗೊಂಬೆಗಳೆಂದರೆ ಬಲು ಜೀವ. ಅವುಗಳು ಇದ್ದರೆ ಸಾಕು ಊಟ ನಿದ್ದೆ ಏನೂ ಬೇಡ, ಅವುಗಳ ಜೊತೆ ಆಟವಾಡುತ್ತ ಕಾಲ ಕಳೆಯುತ್ತಾರೆ. ಚಿಕ್ಕ ಮಕ್ಕಳಿಗೆ ಯಾರು ಸ್ನೇಹಿತರಾಗಿರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ…

ಪುರಾತತ್ವ ಇಲಾಖೆಗೆ ಸವಾಲಾಗಿರುವ ಪ್ರಪಂಚದ 5 ನಿಗೂಡ ಪ್ರಶ್ನೆಗಳು..!!

ವಿಜ್ಞಾನ ಎನ್ನುವುದು ಎಷ್ಟೇ ಮುಂದುವರೆದರು ಕೂಡ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಸಾಕಷ್ಟು ಕಷ್ಟ ಪಡಬೇಕಿದೆ.ಭೂಮಿಯ ಮೇಲೆ ಕೆಲವು ಪುರಾತನ ರಹಸ್ಯಗಳಿದ್ದು ಅವುಗಳಿಗೆ ಉತ್ತರವನ್ನು ಕಂಡು ಹಿಡಿಯಲು ಇದುವರೆಗು ಸಾಧ್ಯವಾಗುತ್ತಿಲ್ಲ. ಆ ರಹಸ್ಯಮಯ ಪ್ರಶ್ನೆಗಳು ವಿಜ್ಞಾನದ ದೃಷ್ಟಿಯಿಂದ ದೂರವಿದ್ದು ಅನೇಕ ವರ್ಷಗಳಿಂದ…

ಆಧುನಿಕ ಜಗತ್ತಿನ ಅನ್ವೇಷಣೆಗಳಿಗೆ ಸ್ಪೂರ್ತಿಯಾಗಿದೆ ಈ ಶಿವಲಿಂಗ..!!

ಶಿವ, ನಮ್ಮ ಹಿಂದೂ ಧರ್ಮದ ಪ್ರಮುಖ ದೇವರು. ಮುಕ್ಕಣ್ಣ, ಹರ, ಪರಮೇಶ್ವರ ಹೀಗೆ ಅನೇಕ ಹೆಸರುಗಳಿಂದ ಈತನನ್ನು ಪೂಜಿಸುತ್ತಾರೆ. ಶಾಂತ ರೂಪಿಯಾದ ಈತನನ್ನು ಪೂಜಿಸುವ ದೇವಸ್ಥಾನಗಳು ನಮ್ಮ ದೇಶದ ತುಂಬೆಲ್ಲ ಸಿಗುತ್ತವೆ. ಭೂಮಿಯ ಮೇಲೆ ಇರುವ ತನ್ನ ಭಕ್ತರಿಗೆ ದರ್ಶನ ನೀಡಲು…

ಟೈಮ್ ಟ್ರಾವೆಲ್ ಮಾಡಿದ ವ್ಯಕ್ತಿಗಳಿವರು..!

ಟೈಮ್ ಟ್ರಾವೆಲ್ ಮಾಡಬಹುದೇ ಎನ್ನುವುದು ಅನೇಕ ವರ್ಷಗಳಿಂದ ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನಗಳ ಪ್ರಶ್ನೆಯಾಗಿದೆ. ಭೂತಕಾಲ ಅಥವ ಭವಿಷ್ಯಕ್ಕೆ ಹೋಗಿ ನಡೆಯುವ ಅಥವ ನಡೆದಿರುವ ಘಟನೆಗಳನ್ನು ಸರಿ ಪಡಿಸಿಕೊಳ್ಳುವುದು ಟೈಮ್ ಟ್ರಾವೆಲ್ ನ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಟೈಮ್…

ಜಗತ್ತಿನಲ್ಲಿರುವ ರಹಸ್ಯಮಯ ಪುಸ್ತಕಗಳಿವು..!

ಪುಸ್ತಕಗಳನ್ನು ಓದುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ನೀವೇ ಹೇಳಿ. ಒಂದೊಂದು ಪುಸ್ತಕದಿಂದಲು ನಮಗೆ ಜ್ಞಾನ ಸಂಪಾದನೆ ಆಗುತ್ತ ಹೋಗುತ್ತದೆ. ಆದರೆ ಜಗತ್ತಿನಲ್ಲಿ ಕೆಲವು ಪುಸ್ತಕಗಳಿದ್ದು ಅವುಗಳಿಂದ ಜ್ಞಾನ ಸಂಪಾದನೆ ಆಗುವುದು ಇರಲಿ, ಅವುಗಳ ಒಳಗೆ ಏನಿದೆ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ.…

ಈ ಮಕ್ಕಳಿಗೆ ತಮ್ಮ ಹಿಂದಿನ ಜನ್ಮದ ನೆನಪು ಇದೆ..!

ನಮಗೆಲ್ಲ ಒಂದಲ್ಲ ಒಂದು ಬಾರಿಯಾದರು ನಾವು ಹಿಂದಿನ ಜನ್ಮದಲ್ಲಿ ಏನಾಗಿದ್ದೆವು ಎಂದು ತಿಳಿಯುವ ಕುತೂಹಲ ನಮ್ಮ ತಲೆಯಲ್ಲಿ ಮೂಡಿರುತ್ತದೆ. ಕೆಲವೊಮ್ಮೆ ಈ ಪುನರ್ಜನ್ಮವೆಲ್ಲ ಸುಳ್ಳು ಎಂದು ಕೂಡ ಅನ್ನಿಸಿರುತ್ತದೆ. ನೀವು ಸಹಜವಾಗಿ ಜನರ ಬಾಯಲ್ಲಿ “ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ನೋ…

ಈ ನಿಗೂಡ ಬಾಗಿಲುಗಳನ್ನು ತೆರೆಯಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ..!

ಮನುಷ್ಯನು ಅದೆಷ್ಟೇ ಬುದ್ದಿವಂತನಾಗಿರಬಹುದು, ವಿಜ್ಞಾನ ಅದೆಷ್ಟೇ ಮುಂದುವರೆದಿರಬಹುದು ಆದರೆ ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರ ಅವನಿಂದ ಕಂಡು ಹಿಡಿಯಲು ಸಾಧ್ಯವಾಗಿಲ್ಲ.ಈ ಜಗತ್ತಿನಲ್ಲಿ ಈ ರೀತಿ ಕಂಡು ಹಿಡಿಯಲು ಸಾಧ್ಯವಾಗದ ಅನೇಕ ರಹಸ್ಯಗಳಿದ್ದು ಅವುಗಳನ್ನು ಭೇದಿಸಲು ಹೋದವರು ಜೀವಂತವಾಗಿ ಮರಳಿ ಬಂದಿಲ್ಲ. ಇಂದು…

ಇವರ ಬಳಿ ಅದೆಷ್ಟು ಕಾರುಗಳಿವೆ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ?

ಮನುಷ್ಯನೇ ಹಾಗೆ, ತನ್ನ ಬಳಿ ಹಣವಿಲ್ಲದಿದ್ದಾಗ ಸಪ್ಪೆ ಮುಖ ಹಾಕಿಕೊಂಡು ಅವರಿವರನ್ನು ಬೈಯುತ್ತ ಕುಳಿತುಬಿಡುತ್ತಾನೆ. ಅದೇ ಅವನ ಬಳಿ ಸ್ವಲ್ಪ ಹಣ ಇದ್ದಾಗ ಅಯ್ಯೋ ಇನ್ನೂ ಸ್ವಲ್ಪ ಹಣ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅಂದುಕೊಳ್ಳುತ್ತಾನೆ. ಹೆಚ್ಚು ಹಣ ಸಿಕ್ಕರೆ ಅದನ್ನು…

ಆಧುನಿಕ ಜಗತ್ತಿನ ವಿರುದ್ಧ ಹೋರಾಡಿ ತಮ್ಮ ಕಾಡನ್ನು ಉಳಿಸಿಕೊಂಡ ಕಾಡು ಜನರ ಸತ್ಯ ಕಥೆ..!!

ಮನುಷ್ಯ ಎನ್ನುವ ಪ್ರಾಣಿಯೇ ಹಾಗೆ, ಈ ಗ್ರಹದ ಮೇಲೆ ಎಲ್ಲಾ ಜೀವಿಗಳ ಮೇಲೆ ಹಾಗು ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಇರುವನು. ಪ್ರಗತಿ ಎನ್ನುವ ಹೆಸರಿನಲ್ಲಿ ಅದೆಷ್ಟೋ ಮರಗಳನ್ನು ಕಡಿದು ಹಾಕಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಇದು ಹೀಗೆ ಮುಂದುವರೆದರೆ ಮುಂದೊಂದು…

ಕಣ್ಣಿಲ್ಲದ ಅವಳು ನನ್ನ ಮನೆಯ ದೀಪವನ್ನು ಬೆಳಗಿದಳು..!!

ಬೆಂಗಳೂರು ಎನ್ನುವ ದೊಡ್ಡ ಪಟ್ಟಣವೇ ಹಾಗೆ. ಇಲ್ಲಿ ಮನುಷ್ಯರು ಮತ್ತು ಮನುಷ್ಯತ್ವ ಎನ್ನುವುದಕ್ಕೆ ಬೆಲೆಯೇ ಇಲ್ಲ. ಎಲ್ಲಿ ನೋಡಿದರೂ ದ್ವೇಷ, ಅಸೂಹೆ ತುಂಬಿದ ಜನರೇ ಜಾಸ್ತಿ. ಪ್ರೀತಿಯಿಂದ ಯಾರಾದರು ಮಾತನಾಡಿದರೆ ಅದರ ಹಿಂದೆ ಏನಾದರು ಒಂದು ಲಾಭವನ್ನು ಇಟ್ಟುಕೊಂಡೆ ಮಾತನಾಡುತ್ತಾರೆ. ಇಂತಹ…

ಅವನು ಬಂದೇ ಬರುತ್ತಾನೆ ಎನ್ನುವ ಆ ನಂಬಿಕೆ..!!

ಇಂದು ನಾವು ನಮ್ಮ ದೇಶದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆಂದರೆ  ಅದಕ್ಕೆ ಕಾರಣ ಯಾರು ಗೊತ್ತೇ? ನಮ್ಮ ದೇಶವನ್ನು ಕಾಯುತ್ತಿರುವ ಯೋದರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಶತ್ರುಗಳ ವಿರುದ್ದ ಹಗಲು ರಾತ್ರಿ ಎನ್ನದೆ ಸೆಣೆಸಾಡುತ್ತಿದ್ದಾರೆ. ಸಾವಿರಾರು ಯೋದರು ತಮ್ಮ ಕುಟುಂಬವನ್ನು ಬಿಟ್ಟು ನಮ್ಮ…

ಜಾತ್ರೆಯಲ್ಲಿ ಸಿಕ್ಕ ಆ ಮುದ್ದಾದ ಹುಡುಗಿಯ ಹೆಸರೇ ಜಾನಕಿ..!

ಎಷ್ಟು ಕಣಪ್ಪ ಈ ಪೀಪಿ ಎಂದು ಕೇಳುತ್ತಾ ಬಗಲಲ್ಲಿ ಎತ್ತಿಕೊಂಡಿದ್ದ ನಮ್ ಅಣ್ಣನ ಮಗಳು ಶ್ವೇತಾಳ ಮೂಗಿನಿಂದ ಬರುತ್ತಿದ್ದ ಗೊಣ್ಣೆಯನ್ನು ವರೆಸುತ್ತ ಜೋತು ಮೋರೆ ಹಾಕಿಕೊಂಡಿದ್ದಳು ನಮ್ ಅಮ್ಮ. ಅವಳ ಜೊತೆಯಲ್ಲಿ ಹೋಗಿದ್ದ ತಪ್ಪಿಗಾಗಿ ಕೈಯಲ್ಲಿ ಅಕ್ಕನಿಗಾಗಿ ತೆಗೆದುಕೊಂಡಿದ್ದ ಬಳೆಗಳು ಹಾಗೂ…

ಅಂದು ಪಾರ್ಕಿನಲ್ಲಿ ಸಿಕ್ಕ ಅವಳು ನನ್ನ ಮನಸನ್ನೇ ಕದ್ದಳು..!

ಪ್ರತಿದಿನದಂತೆ ಅಂದೂ ಕೂಡ ನನ್ನ ನಾಯಿಯ ಜೊತೆಗೆ ಬೆಳಗ್ಗೆ ಎದ್ದು ಮನೆಯ ಹತ್ತಿರವಿರುವ ಪಾರ್ಕಿಗೆ ವಾಯು ಸೇವನೆಗೆಂದು ತೆರಳಿದ್ದೆ. ಅದೇನೋ ಗೊತ್ತಿಲ್ಲ ಅಂದಿನ ದಿನವು ತುಂಬಾ ಸುಂದರವಾಗಿತ್ತು. ನನ್ನ ಹಾಗೆಯೇ ತುಂಬಾ ಜನರು ಬಂದಿದ್ದರು. ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ…

ಬಲವಂತಕ್ಕೆ ಆದ ಈ ಮದುವೆ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು.!

ಜಾತಿ, ಈ ಜಗತ್ತಿನಲ್ಲಿ ಇಂದಿಗೂ ಕಾಡುತ್ತಿರುವ ಒಂದು ದೊಡ್ಡ ಪೀಡೆ. ಯಾವ ಜಾತಿ ಆದರೇನು ನಮ್ಮೆಲ್ಲರ ಮೈಯಲ್ಲಿ ಹರಿಯುತ್ತಿರುವ ರಕ್ತವು ಒಂದೇ ತಾನೇ? ಆದರೂ ಜನರು ಮಾಡಿಕೊಂಡಿರುವ ಈ ಜಾತಿ ಅನ್ನುವ ಪೀಡೆಯು ಎಷ್ಟೋ ಜೀವನವನ್ನೇ ಹಾಳು ಮಾಡಿದೆ. ಅದರಲ್ಲಿ ನನ್ನ…

ಮದುವೆ ಆಗಿ ಪ್ರೀತಿ ಮಾಡಿದ ದಂಪತಿಗಳ ಕಥೆ

ತುಂಬಾ ಜನ ಹೇಳುವುದನ್ನು ಕೇಳಿದ್ದೇನೆ ಪ್ರೀತಿಸಿ ಮದುವೆ ಆದವರೇ ಪುಣ್ಯವಂತರು. ಅವರಷ್ಟು ಖುಷಿಯಾಗಿ ಇರೋರು ಯಾರು ಇಲ್ಲ, ಒಬ್ಬರಿಗೊಬ್ಬರು ತುಂಬಾ ಅರ್ಥ ಮಾಡಿಕೊಂಡು ಬದುಕುತ್ತಾರೆ ಅಂತ. ಪ್ರತಿ ಸಲ ನನ್ನ ಸ್ನೇಹಿತರು ಇದನ್ನು ಹೇಳುತ್ತಿದ್ದಾಗ ನನಗೂ ಯಾವುದಾದರೂ ಹುಡುಗಿಯನ್ನು ಪ್ರೀತಿಸಿ ಮದುವೆ…

ಅವನ ಪ್ರೀತಿಯು ನನಗಿದ್ದ ರೋಗವನ್ನೇ ಸರಿಪಡಿಸಿತು..!

ಜಾಸ್ತಿ ಹೊತ್ತು ಓಡಾಡಲು ಆಗುತ್ತಿರಲಿಲ್ಲ, ಕೆಲವೊಮ್ಮೆ ತಲೆ ತಿರುಗುತ್ತಾ ಇತ್ತು. ಕೈ ಕಾಲುಗಳೆಲ್ಲಾ ತುಂಬಾ ನಡುಗುತ್ತಿದ್ದವು. ಎಷ್ಟೋ ಡಾಕ್ಟರ್ ಗಳಿಗೆ ತೋರಿಸಿದೆವು ಆದರೆ ಏನೂ ಪ್ರಯೋಜನ ಬರಲಿಲ್ಲ. ಇದಕ್ಕೆ ಪರಿಹಾರವೇ ಇಲ್ಲವೆಂದು ಕೊಂಡು ಎಷ್ಟೋ ಬಾರಿ ಅಳುತ್ತಾ ಕೂರುತ್ತಿದ್ದೆ. ಇದು ಯಾವ…

ನನ್ನ ಬಿಟ್ಟು ಹೋದ ಆ ಕ್ಷಣ..!

ಇಂದಿಗೂ ಅವಳು ಯಾಕೆ ನನ್ನ ಬಿಟ್ಟು ಹೋದಳು ಎಂದು ನನಗೆ ತಿಳಿಯುತ್ತಿಲ್ಲ, ನನಗೆ ಅನ್ನಿಸಿದ ಹಾಗೆ ನನ್ನ ಕಡೆಯಿಂದ ಯಾವ ತರಹದ ತಪ್ಪು ಆಗಿಲ್ಲ. ಕಾರಣ ಕೇಳಿದರೆ ಸರಿಯಾಗಿ ಹೇಳುತ್ತಿಲ್ಲ. ನಿಜವಾಗಿಯೂ ತಪ್ಪು ಮಾಡಿದ್ದರೆ ತಿದ್ದಿಕೊಳ್ಳುವೆ ಆದರೆ ಈ ತರಹ ಹೇಳದೆ…

ಬಸ್ ನಿಲ್ದಾಣದಲ್ಲಿ ಸಿಕ್ಕ ಅವಳು ಕೊಟ್ಟು ಹೋದ ನೋವು..!

ಪ್ರತಿದಿನದಂತೆ ಅಂದೂ ಕೂಡ ಬಸ್ಸಿಗೆ ಕಾಯುತ್ತಾ ಕೂತಿದ್ದೆ, ಆದರೆ ಬಸ್ಸು ಬರದ ಕಾರಣ ಅಣ್ಣ ಕೊಡಿಸಿದ್ದ ಹೊಸ ಮೊಬೈಲ್ನಿಂದ ತೆಗೆದಿದ್ದ ಫೋಟೋಗಳನ್ನು ನೋಡುತ್ತಾ ಕೂತೆ. ಅದೆಲ್ಲಿಂದಲೋ ಬಂದ ಅವಳು ನನ್ನ ಪಕ್ಕದಲ್ಲಿ ಕುಳಿತಳು. ಅಬ್ಬಾ ಎಷ್ಟೊಂದು ಬಿಸಿಲು ಎಂದು ಬಾಟಲಿಯನ್ನು ತೆಗೆದು…

ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಈ ರೀತಿ ಆಗುತ್ತದೆ..!!

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಅದರ ಪರಿಣಾಮ ನಾವೇ ಅನುಭವಿಸಬೇಕಾಗುತ್ತದೆ. ನಮಗೆ ಸೂಕ್ತವಲ್ಲದ ಸ್ಥಳದಲ್ಲಿ ಇರಬೇಕೋ ಬೇಡವೋ ಎಂದು ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ ಅದರಿಂದ ಮುಂದಾಗುವ ಕೆಟ್ಟ ಪರಿಣಾಮಕ್ಕೆ ನಾವೇ ಜವಬ್ದಾರರು, ಅದು ಹೇಗೆ ಎಂದು ನೋಡೋಣ ಬನ್ನಿ…

ಯಾರನ್ನೂ ಕೂಡ ಕೀಳರಿಮೆಯಿಂದ ಕಾಣಬಾರದು ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ..!!

ಮನುಷ್ಯ ಹಣವನ್ನು ಗೌರವಿಸುತ್ತ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾನೆ, ಹಿಂದೆಲ್ಲಾ ಜನರು ತಮ್ಮ ಹಿರಿಯರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಆದರೆ, ಈಗಿನ ಜನರು ಬೇರೆಯವರಿಗೆ ಬೆಲೆಕೊಡುವುದನ್ನೇ ಮರೆತ್ತಿದ್ದಾರೆ, ಅದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ. ಒಮ್ಮೆ ಒಬ್ಬ ಮಹಿಳೆ ದೆಹಲಿಯಿಂದ ಬೆಂಗಳೂರಿಗೆ ವಿಮಾನದ…

ಮನುಷ್ಯನು ಸಾಯುವ ಸಮಯ ಬಂದಾಗ ಈ ವಿಷಯಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾನೆ..!

ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂದು ಒಂದಲ್ಲಾ ಒಂದು ದಿನ ಖಂಡಿತ ಅಂದುಕೊಂಡಿರುತ್ತಾನೆ. ಆದರೆ, ಎಲ್ಲರಿಗೂ ಅದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಅದಕ್ಕೆ ಹಲವು ಕಾರಣಗಳಿರಬಹುದು. ಅದು ನಮ್ಮ ಸ್ವಂತ ತಪ್ಪಾಗಿರಬಹುದು, ಮನೆಯವರ, ಸ್ನೇಹಿತರ, ಬಂಧುಗಳ ಸರಿಯಾದ ಬೆಂಬಲವಿಲ್ಲದೆ ಅಥವಾ ಅವರ ತಪ್ಪಿನಿಂದ…

ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಿದರೆ ಹೇಗೆ ಅದ್ಭುತವಾಗಿ ಕೆಲಸ ಮಾಡುತ್ತದೆ ನೀವೇ ನೋಡಿ..!

ಎಷ್ಟೇ ಶ್ರೀಮಂತರಾದರು ಹಣ ಎಲ್ಲಿ ಮತ್ತು ಹೇಗೆ ಬಳಸಬೇಕು ಎಂದು ಗೊತ್ತಿರದಿದ್ದರೆ ಹೇಗೆ ಪರಿತಪಿಸುತ್ತಾನೋ ಅದೇ ರೀತಿ ಬಡವ ತನ್ನ ತಾಳ್ಮೆ ಕಳೆದು ಕೊಂಡರೆ ಏನು ಸಾಧಿಸಲಾಗುವುದಿಲ್ಲ. ಜೀವನದಲ್ಲಿ ಅತ್ಯಂತ ಮುಖ್ಯವಾಗಿರುವುದು “ತಾಳ್ಮೆ”, ಅದು ಯಾಕೆ ಎಂದು ಇದನ್ನು ಓದಿದ ನಂತರ…

ಬೇರೆಯವರನ್ನು ತಪ್ಪಾಗಿ ಅರ್ಥೈಸಿಕೊಂಡರೆ ಏನಾಗುತ್ತದೆ..!

ನಾವು ನಮ್ಮ ತಪ್ಪುಗಳನ್ನು ಸರಿಮಾಡಿಕೊಳ್ಳಲಾಗದೆ ಬೇರೆಯವರನ್ನು ಬಹು ಬೇಗ ದೊಷಿಸುತ್ತೇವೆ. ಪಾಸ್ ಆದರೆ ನಮ್ಮ ಸ್ನೇಹಿತರ ಎದುರು ಮತ್ತು  ಮನೆಯವರ ಹತ್ತಿರ  ಜಂಬದಿಂದ, “ಹೇ ನೋಡಿದ್ರ ನನ್ನ ಆಯ್ಕೆ ಎಷ್ಟು ಸರಿಯಾಗಿತ್ತು, ನಿಮ್ಮ ಮಾತು ಕೇಳಿ ಆ ಕೋರ್ಸ್ ಮಾಡಿದಿದ್ದರೆ ಫೇಲ್…

ಪ್ರತಿನಿತ್ಯ ಆಹಾರವನ್ನು ವೇಸ್ಟ್ ಮಾಡುತ್ತೀರಾ..? ಹಾಗಾದರೆ ಇದನ್ನು ಒಮ್ಮೆ ಓದಿ..!!

ಒಂದೂರಿನಲ್ಲಿ ಒಂದು ಬಡ ಕುಟುಂಬವಿತ್ತು , ಆ ಕುಟುಂಬದಲ್ಲಿ ತಂದೆ , ತಾಯಿ ಮತ್ತು ಮೂರು ಜನ ಮಕ್ಕಳು ಇದ್ದರು. ತಂದೆ ಯಾವಾಗಲೂ ಅನಾರೋಗ್ಯದಿಂದ ಇರುತ್ತಿದ್ದನು, ಹೀಗೆ ಅನಾರೋಗ್ಯದಿಂದ ಆತ ಒಂದು ದಿನ ಸಾಯುತ್ತಾನೆ, ಇದನ್ನು ನೋಡಿ ಅಕ್ಕಪಕ್ಕದವರು 2 ದಿನಗಳವರೆಗೆ…

ನೀವು ಜೀವನದಲ್ಲಿ ಯಶಸ್ಸು ಆಗದ ಹಾಗೆ ಮಾಡುತ್ತಿರುವ ವ್ಯಕ್ತಿ ಈತನೇ ನೋಡಿ..!!

ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲ ದಿನಗಳಿಂದ ಎಲ್ಲಾ ಕೆಲಸಗಾರರು ಪ್ರತಿನಿತ್ಯ ಬೇರೆಯವರ ಬಗ್ಗೆ ತಪ್ಪಾಗಿ ಮಾತನಾಡಿಕೊಳ್ಳುತ್ತಿದ್ದರು. ಬೇರೆಯವರಿಂದ ತಮಗೆ ನಷ್ಟವಾಗುತ್ತಿದೆ ಎಂದೆಲ್ಲಾ ಮತ್ತೊಬ್ಬರನ್ನು ದೂಷಿಸುತ್ತಿದ್ದರು. ಇದನ್ನು ಕೆಲ ದಿನಗಳಿಂದ ಗಮನಿಸಿದ ಕಂಪನಿಯ ಮ್ಯಾನೇಜರ್ ಎಲ್ಲರನ್ನು ಕರೆಸಿ ಏನು ತೊಂದರೆ ಆಗಿದೆ ಎಂದು…

ನೀವು ಜೀವನದಲ್ಲಿ ಕಷ್ಟಪಡುತ್ತಿದ್ದೀರಾ ಹಾಗಾದರೆ ಈ ಕಥೆಯನ್ನು ಓದಿ..!!

ನಾವು ಇಂದು ಮಾಡುವ ಕೆಲಸದಿಂದ ನಮಗೆ ನಾಳೆ ಖಂಡಿತ ಉಪಯೋಗವಾಗುತ್ತದೆ ಎನ್ನುವುದು ಎಷ್ಟು ಸತ್ಯ ಎಂದು ನಮಗೆ ಕೆಲವೊಮ್ಮೆ ಗೊತ್ತಾಗುವುದಿಲ್ಲ. ಬರೀ ನಮಗೆ ಏಕೆ ಹೀಗಾಗುತ್ತದೆ ಎಂದು ಬೇರೆಯವರನ್ನು ಶಪಿಸುತ್ತೇವೆ. ಆದರೆ ಇಂದು ನಾವು ಪಡುವ ಕಷ್ಟದಿಂದ ಹೇಗೆಲ್ಲಾ ಸಹಾಯವಾಗುತ್ತದೆಂದು ತಿಳಿಸುತ್ತೇವೆ…

ಸಹವಾಸ ಹೇಗಿರಬೇಕು ಎಂದು ಹೇಳುವ ಕಥೆ..!!

ಅದೊಂದು ಊರಿನಲ್ಲಿ ರಾಮು ಮತ್ತು ರಮೇಶ ಎನ್ನುವ ಇಬ್ಬರು ಸ್ನೇಹಿತರಿದ್ದರು. ರಾಮುವಿಗೆ ರಮೇಶನನ್ನು ಕಂಡರೆ ತುಂಬಾ ಇಷ್ಟವಿತ್ತು. ಅದಕ್ಕೆ ಕಾರಣ ಅವನ ಗುಣ ಕಂಡು ಅಲ್ಲ. ರಮೇಶನ ಮನೆಯ ಹತ್ತಿರ ಇದ್ದ ಒಂದು ಮಾವಿನ ತೋಟ, ಆ ತೋಟದಲ್ಲಿ ಸಿಗುವ ಮಾವಿನ…

ಧೈರ್ಯದಿಂದ ಮುಂದೆ ಸಾಗಿದರೆ ಮಾತ್ರ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ..!

ನೀವು ಸಾಮಾನ್ಯವಾಗಿ ಎಲ್ಲಾ ಕಥೆಗಳಲ್ಲಿ ನರಿ ತುಂಬಾ ಬುದ್ದಿವಂತ ಪ್ರಾಣಿ ಎಂದು ಕೇಳಿರುತ್ತೀರ, ಆದರೆ ಎಲ್ಲಾ ಪ್ರಾಣಿಗಳಿಗೂ ಭಯವಿರುತ್ತದೆ ಅದು ನರಿಗೂ ಅನ್ವಹಿಸುತ್ತದೆ. ಭಯದಿಂದ ಇರುವಾಗ ಎಲ್ಲರಿಗೂ ತಲೆ ಕೆಲಸ ಮಾಡುವುದಿಲ್ಲ. ಭಯದಿಂದ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ ಎನ್ನವುದಕ್ಕೆ ಈ…

ತಮ್ಮಲ್ಲೇ ತಪ್ಪುಗಳನ್ನು ಇಟ್ಟುಕೊಂಡು ಬೇರೆಯವರನ್ನು ದೋಷಿಸುವ ವ್ಯಕ್ತಿಗಳಿಗಾಗಿ ಇಲ್ಲೊಂದು ಸುಂದರವಾದ ಕಥೆ..!!

ಈ ಜಗತ್ತಿನಲ್ಲಿ ಅದೆಂತಹ ಜನರು ಇರುತ್ತಾರೆಂದರೆ, ತಾವು ತಪ್ಪು ಮಾಡಿದರೂ ಅಥವ ತಮ್ಮಲ್ಲೇ ತಪ್ಪು ಇದ್ದರೂ ಕೂಡ ಅದನ್ನು ಒಪ್ಪಿಕೊಳ್ಳದೆ ಬೇರೆಯವರನ್ನು ದೂಷಿಸುತ್ತಿರುತ್ತಾರೆ. ಆದರೆ ಅಹಂಕಾರದ ಕಣ್ಣು ಮುಚ್ಚಿ ಜ್ಞಾನದ ಕಣ್ಣು ತೆರೆದಾಗಲೇ ಒಂದು ಸುಂದರ ಜಗತ್ತನ್ನು ಕಾಣಲು ಸಾಧ್ಯ ಎಂಬುದಕ್ಕೆ…

ಟೈಟಾನಿಕ್ ಹಡಗಿನ ದುರಂತದಿಂದ ನೀವು ಕಲಿಯಬೇಕಾಗಿರುವ ನೀತಿ ಪಾಠ..!

ನಿಮಗೆಲ್ಲ 1912 ರಲ್ಲಿ ಮುಳುಗಿದ ಟೈಟಾನಿಕ್ ಹಡುಗಿನ ಬಗ್ಗೆ ಗೊತ್ತೇ ಇರುತ್ತದೆ. ತನ್ನ ಮೊದಲ ಯಾನದಲ್ಲಿಯೇ ಈ ಹಡಗು ಐಸ್ ಬರ್ಗ್ ಗೆ ತಾಗಿ ಮುಳುಗಿತ್ತು. ಟೈಟಾನಿಕ್ ಹಡಗು ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗುತ್ತಿರುವಾಗ ಅದರ ಸಮೀಪದಲ್ಲಿಯೇ ಇನ್ನು ಮೂರು ಹಡಗುಗಳು ಇದ್ದವು…

ಜೀವನದಲ್ಲಿ ಬೇರೆಯವರ ಮೇಲೆ ಅತಿಯಾಗಿ ಅವಲಂಬಿತರಾದರೆ ಏನಾಗುತ್ತದೆ ಎಂದು ತಿಳಿಯಲು ಈ ಕಥೆಯನ್ನು ಓದಿ..!

ಮನುಷ್ಯನೆಂದ ಮೇಲೆ ಬೇರೆಯವರ ಮೇಲೆ ಅವಲಂಬಿತವಾಗಿರುವುದು ಸಾಮಾನ್ಯ, ಆದರೆ ಅದು ಅತಿಯಾದರೆ ಏನಾಗುತ್ತದೆ ಎಂದು ತಿಳಿಯಲು ಈ ಕಥೆಯನ್ನು ಓದಿ. ಅದೊಂದು ಕಾಡಿನಲ್ಲಿ ಒಂದು ಪುಟ್ಟ ಮೊಲವಿತ್ತು ಆ ಮೊಲಕ್ಕೆ ಪ್ರತಿದಿನವೂ ಒಂದೇ ಭಯ, ಅದೇನೆಂದರೆ ಭೇಟೆ ನಾಯಿ. ಪ್ರತಿ ಬಾರಿ…

ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಗುರಿ ಹೊಂದಿದ್ದರೆ ಇದನ್ನು ತಪ್ಪದೇ ಓದಿ..!!

ಸಾದಿಸಬೇಕೆಂದರೆ ಛಲವಿರಬೇಕು ಎಂಬ ಮಾತು ಅಕ್ಷರ ಸಹ ನಿಜ. ಇನ್ನು ಏನಾದರು ಸಾಧಿಸಬೇಕಾದರೆ ಕೇವಲ ಗುರಿ ಇಟ್ಟುಕೊಳ್ಳುವುದು ಮಾತ್ರವಲ್ಲ, ಅದರೆಡೆಗೆ ಸಾಗಲು ಶ್ರಮವಹಿಸಿ ದುಡಿಯಬೇಕು. ಇವೆಲ್ಲದರ ಜೊತೆಗೆ ಆತ್ಮವಿಶ್ವಾಸ ಅತಿಮುಖ್ಯ, ಅದು ಯಾವ ರೀತಿ ಇರಬೇಕು ಎಂದು ತಿಳಿದುಕೊಳ್ಳಲು ಮುಂದೆ ಓದಿ.…

ಬಿಸ್ಕತ್ ಪಾಕೆಟ್ ನಿಂದ ಕಲಿತ ಜೀವನದ ಅತಿದೊಡ್ಡ ಪಾಠ..!!

ನಾವು ಪ್ರತಿಯೊಬ್ಬರಿಗೂ ಬೆಲೆ ಕೊಡಬೇಕು ಬೇರೆಯವರನ್ನು ಗೌರವಿಸುವುದರಲ್ಲಿಯೇ ನಮ್ಮ ಗೌರವ ಅಡಗಿದೆ. ಬೇರೆಯವರನ್ನು ನಾವು ಗೌರವಿಸದೆ, ನಮ್ಮ ತಪ್ಪುಗಳನ್ನು ಲೆಕ್ಕಿಸದೆ ಕೇವಲ ಅವರ ತಪ್ಪುಗಳನ್ನು ಮಾತ್ರ ಪರಿಗಣಿಸಿದರೆ ಮುಂದೊಂದು ದಿನ ನಷ್ಟ ನಮಗೆ ಆಗುತ್ತದೆ ಹೊರತು ಅವರಿಗಲ್ಲ. ಇದಕ್ಕೆ ಪೂರಕವೆಂಬಂತೆ ಇಲ್ಲೊಂದು…

ಕೆಲವರಿಗೆ ಜೀವನದಲ್ಲಿ ಎಷ್ಟೇ ಅವಕಾಶ ಸಿಕ್ಕರೂ ಕೂಡ ಸಫಲರಾಗದಿರುವುದಕ್ಕೆ ಕಾರಣ ಇದೇ ನೋಡಿ..!!

ಕೆಲವರಿಗೆ ಎಷ್ಟು ಅವಕಾಶ ಸಿಕ್ಕರೂ ಜೀವನದಲ್ಲಿ ಸಫಲರಾಗುವುದಿಲ್ಲ ಯಾಕೆ ಎಂಬುದು ಅವರಿಗೆ ಸಹ ಗೊತ್ತಿರುವುದಿಲ್ಲ. ಆದರೆ, ನಿಜ ಹೇಳಬೇಕೆಂದರೆ ಅವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅದಕ್ಕೆ ಒಂದು ಸರಿಯಾದ ಉದಾಹರಣೆಯಂತಿದೆ ಈ ಕಥೆ. ಅದೊಂದು ಊರಿನಲ್ಲಿ ಒಂದೊಮ್ಮೆ ಗ್ರಂಥಾಲಯಕ್ಕೆ ಆಕಸ್ಮಿಕವಾಗಿ…

ಒಬ್ಬರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ..!

ನೀವು ಸಾಕಷ್ಟು ಜನರನ್ನು ನೋಡಿರುತ್ತೀರಿ, ಅರ್ಥವಿಲ್ಲದೆ ಸರಿಯಾಗಿ ತಿಳಿದುಕೊಳ್ಳದೆ ಬೇರೆಯವರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದು ಅವರ ಕೆಲಸವಾಗಿಬಿಟ್ಟಿರುತ್ತದೆ. ನಮಗೆ ತಿಳಿಯದೇ ಅಥವ ಯೋಚಿಸದೆ ಬೇರೆಯವರ ಬಗ್ಗೆ ಸುಮ್ಮನೆ ಮಾತನಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಕಥೆಯೇ ಉದಾಹರಣೆ. ಒಮ್ಮೆ ಒಬ್ಬ ವಯಸ್ಸಾದ…

ಈ ಕಥೆಯು ನಿಮ್ಮ ಶಾಲೆಯ ಗುರುಗಳನ್ನು ಒಮ್ಮೆ ನೆನಪು ಮಾಡಿಸುತ್ತದೆ..!!

ಈ ಜಗತ್ತಿನಲ್ಲಿ ಅವನಿಗೆ ಅಂತ ಯಾರೂ ಇಲ್ಲವೆಂದು ಪ್ರತಿ ದಿನ ಅಳುತ್ತಿದ್ದ. ಶಾಲೆಯಲ್ಲಿ ಯಾರ ಜೊತೆಯೂ ಸೇರಲು ಅವನಿಗೆ ಮನಸ್ಸು ಬರುತ್ತಿರಲಿಲ್ಲ. ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಯಾವಾಗಲೂ ಮಲಗುತ್ತಿದ್ದ. ಅದೊಂದು ದಿನ ಶಾಂತಿ ಟೀಚರ್ ಅವನು ಮಲಗಿದ್ದನ್ನು ಗಮನಿಸಿ ಅವನ ಬಳಿ…

ನಿಮ್ಮ ಜೀವನದಲ್ಲಿ ಖುಷಿಯನ್ನು ಮರಳಿ ತರುವ ಕಥೆ..!!

ಚಿಕ್ಕ ಚಿಕ್ಕ ಸಂಗತಿಗಳಲ್ಲಿ ಹೇಗೆ ನಾವು ಜೀವನದಲ್ಲಿ ಕಳೆದುಕೊಂಡ ಖುಷಿಯನ್ನು ಮರಳಿ ಪಡೆಯಬಹುದು ಎಂಬುದಕ್ಕೆ ಈ ಘಟನೆ ಸರಿಯಾದ ಉದಾಹರಣೆ. ಬೆಳೆಯುತ್ತಿರುವ ನಗರಗಳ ಜೊತೆ ಬದಲಾದ ಜೀವನಶೈಲಿಯಿಂದ ನಾವು ಸಣ್ಣ ಸಂಗತಿಗಳಲ್ಲಿ ಖುಷಿಯನ್ನು ಹುಡುಕುವುದನ್ನೇ ಮರೆತ್ತಿದ್ದೇವೆ. ಒಂದೊಮ್ಮೆ ಒಬ್ಬ ಶ್ರೀಮಂತ ಸುಂದರ…

ಇತರರಿಗೆ ಸಹಾಯ ಮಾಡಿದರೆ ಅದು ನಿಮಗೆ ಗೊತ್ತಿಲ್ಲದೆ ತಿರುಗಿ ಬರುತ್ತದೆ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ..!

ಒಮ್ಮೆ ಒಬ್ಬ ಬಡ ವೈದ್ಯಕೀಯ ವಿದ್ಯಾರ್ಥಿ ತನ್ನ ಓದಿನ ಖರ್ಚುಗಳನ್ನು ನಿರ್ವಹಿಸಲು ಕಾಲೇಜಿನ ನಂತರ ಮನೆ-ಮನೆಗೆ ಹೋಗಿ ಮನೆ ಅಲಂಕಾರದ ವಸ್ತುಗಳನ್ನು ಮಾರುತ್ತಿದ್ದ. ವ್ಯಾಪಾರವು ಚೆನ್ನಾಗಿಯೇ ನಡೆಯುತ್ತಿತ್ತು, ತನ್ನ ಓದಿಗೆ ಬೇಕಾದಷ್ಟು ಹಣವನ್ನು ಅವನು ಸಂಪಾದಿಸುತ್ತಿದ್ದ. ಆದರೆ, ಎಲ್ಲರ ವ್ಯಾಪಾರದಲ್ಲಿಯೂ ಒಂದಲ್ಲಾ…

ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ..!

ನಮಗೆ ಎದುರಾಗುವ ಎಲ್ಲಾ ಸಂದರ್ಭಗಳು ನಮ್ಮನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ ಎಂದು ಭಾವಿಸಿ ನಡೆದರೆ ನಮಗೆ ಕೆಲಸ ಮಾಡುವುದರಲ್ಲಿ ಉತ್ಸಾಹ ಹೆಚ್ಚುತ್ತದೆ. ಸಿಗುವ ಎಲ್ಲಾ ಒಳ್ಳೆಯ-ಮತ್ತು ಕೆಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಜೀವನದಲ್ಲಿ ಬಹು ಬೇಗ ಮೇಲೆ ಹೋಗುತ್ತೇವೆ, ಆಗುವುದೆಲ್ಲ ಒಳ್ಳೆಯದೇ ಎಂಬ ನುಡಿಯನ್ನು…

ಜೀವನದಲ್ಲಿ ಗೆಲ್ಲಬೇಕೆಂದರೆ ಈ ಅಂಶಗಳನ್ನು ಸದಾ ನೆನಪಿನಲ್ಲಿಡಿ..!!

ಜೀವನದಲ್ಲಿ ಯಶಸ್ಸು ಕಾಣಬೇಕು ಎನ್ನುವುದು ಎಲ್ಲರ ಆಸೆ. ಆದರೆ ಆ ಯಶಸ್ಸು ಕಾಣುವುದಕ್ಕೆ ಕೆಲವು ಅಂಶಗಳನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಆ ಅಂಶಗಳು ನಿಮ್ಮನ್ನು ಜೀವನದಲ್ಲಿ ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತವೆ. ಆ ಅಂಶಗಳ ಪಟ್ಟಿ ಕೆಳಗಡೆ ಇದೆ. 1.…

ಸ್ವಂತ ದುಡಿಮೆ ಮಾಡುವವರಿಗಾಗಿ ಇಲ್ಲೊಂದು ಕಥೆ..!!

ನಮ್ಮ ಬಳಿ ಹಣವಿಲ್ಲದಿದ್ದರೂ ಕೂಡ ಇರುವಂತಹ ಅಲ್ಪ-ಸ್ವಲ್ಪ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮದೇ ಆದ ಸ್ವಂತ ಉದ್ಯಮ ಸೃಷ್ಟಿ ಮಾಡಿಕೊಂಡು ನಡೆಸುವುದರಲ್ಲಿ ಇರುವ ತೃಪ್ತಿ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದರಲ್ಲಿ ಇರುವುದಿಲ್ಲ. ಅವರು ಎಷ್ಟೇ ಸಂಬಳ ನೀಡಿದರೂ ಕೂಡ ಕೊನೆಗೂ ನೌಕರರಾಗಿಯೇ…

ನಿಜವಾದ ಸ್ನೇಹವೆಂದರೆ ಇದೇನಾ..?

ನನಗೆ ಒಬ್ಬ ಹುಡುಗಿಯು ತುಂಬಾ ಇಷ್ಟವಾಗಿದ್ದಾಳೆ ಮದುವೆ ಆದರೆ ಅವಳನ್ನೇ ಆಗುವುದು ಅಂತ ತೀರ್ಮಾನಿಸಿದ್ದೇನೆ ಎಂದು ಆನಂದನು ಶಂಕರನಿಗೆ ಹೇಳಿದನು. ಅದಕ್ಕೆ ಶಂಕರ್, ಅಯ್ಯೋ ಮೊದಲು ನನ್ನ ಪ್ರೇಮ ಕಥೆಗೆ ಸಹಾಯ ಮಾಡೋ ಆಮೇಲೆ ನಿನ್ನ ಹುಡುಗಿಯ ಕಥೆಯನ್ನು ಕೇಳುತ್ತೇನೆ ಎಂದು…

ಕಳೆದುಹೋಗಿದ್ದ ಬಾಲ್ಯದ ಗೆಳೆಯ ಸಿಕ್ಕ ಕಥೆ..!

ಅವಾಗ ತಾನೇ ಶಾಲೆಯಿಂದ ಬಂದು ಮುಖ ತೊಳೆಯುತ್ತಿದ್ದೆ, ಅಮ್ಮನ ಕಿರುಚಾಟ ಶುರುವಾಯಿತು, ಬೇಗ ಬೇಗ ಮುಖ ತೊಳೆದು ಮಾಡಿರುವ ಮ್ಯಾಗಿ ತಿಂದು tutionಗೆ ತಯಾರಾಗು, ಅದು ಬಿಟ್ಟು ಆ ಪಕ್ಕದ ಮನೆಯ ಸತೀಶನ ಜೊತೆ ಆಟ ಆಡುವುದಕ್ಕೆ ಹೋದರೆ ಅಪ್ಪನಿಗೆ ಹೇಳಿ…

ಕಳೆದುಕೊಂಡ ಆ ಸ್ನೇಹಿತನ ನೆನೆದು ಕಣ್ಣೀರಿಟ್ಟ ಕಥೆ..!

ಬಾಲ್ಯದಿಂದಲೂ ಇಬ್ಬರು ಜೊತೆಯಲ್ಲೇ ಬೆಳೆದೆವು. ಅಕ್ಕ ಪಕ್ಕದ ಮನೆ ಬೇರೆ. ನಮ್ಮ ಕುಟುಂಬದ ಸದಸ್ಯರು ಮತ್ತು ಅವನ ಕುಟುಂಬದ ಸದಸ್ಯರು ತುಂಬಾ ಅನ್ಯೋನ್ಯವಾಗಿ ಇದ್ದೆವು. ಒಂದೇ ಶಾಲೆಯಲ್ಲಿ ಇಬ್ಬರು ಓದುತ್ತಿದ್ದೆವು. ಶಾಲೆಯಲ್ಲಿ ನಮ್ಮಿಬ್ಬರ ಸ್ನೇಹ ಕಂಡು ಹೊಟ್ಟೆ ಉರಿದುಕೊಳ್ಳುತ್ತಿದ್ದವರು ಜಾಸ್ತಿ. ಎಲ್ಲೇ…

ನಾಯಿಗೆ ಇರುವ ಮನಸ್ಸು ಮನುಷ್ಯನಿಗೆ ಇದ್ದಿದ್ದರೆ ಈ ಯುದ್ದವೇ ನಡೆಯುತ್ತಿರಲಿಲ್ಲ ಎಂದು ಮರುಗಿದ ಆ ಯೋಧ..!

ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಕ್ಯಾಂಪ್ ನ ಒಳಗಡೆ ಹೋಗಿ ಮಲಗಿದೆ. ಮಲಗಿ ಹತ್ತು ನಿಮಿಷ ಕೂಡ ಆಗಿರಲಿಲ್ಲ. ತುಂಬಾ ಜೋರಾದ ಶಬ್ದ ಕೇಳಿ ಬಂತು. ಮಲಗಿದ್ದ ನನಗೆ ಎಲ್ಲಿ ನನ್ನ ಹೃದಯವೇ ಒಡೆದು ಹೋಯಿತೋ ಎಂದು ಗಾಬರಿಯಿಂದ ಎದ್ದೆ.…

Trending Post